ಪೂಜ್ಯರ ಹಿರಿಮೆ
ಶ್ರೀ ಷ. ಬ್ರ .ಲಿಂ ಶಾಂತವೀರ ಶಿವಾಚಾರ್ಯರು
ಕಲಬುರಗಿ ತಾಲೂಕಿನ ಪಟವಾದ ಗ್ರಾಮದಲ್ಲಿ ತಂದೆ ಸಿದ್ದಲಿಂಗಯ್ಯ, ತಾಯಿ ನಾಗಮ್ಮಾ ಅವರ ಉದರದಲ್ಲಿ ಜನ್ಮತಾಳಿ ಸೊಂತ ಶ್ರೀಮಠಕ್ಕೆ ಪೀಠಾಧಿಪತಿಗಳಾಗಿ ಉನ್ನತ ಶಿಕ್ಷಣ ಸಂಸ್ಕೃತದಲ್ಲಿ ಮುಗಿಸಿ, ಎಲ್ಲಾ ಭಾಷೆಗಳ ಪಾರಂಗತರಾಗಿ ಕರ್ನಾಟಕ ಆಂಧ್ರ ಮಹಾರಾಷ್ಟ್ರ ಭಕ್ತರ ಮನದಲ್ಲಿ ಬೆರೆದು, ಪ್ರಾಚಿನ ಕಾಲದಲ್ಲಿದ್ದ ನರನಾಳದ ಮಲ್ಲಿಕಾರ್ಜುನ ದೇವಾಲಯವನ್ನು ಸಂಪೂರ್ಣ ಜೀಣೋದ್ಧಾರ ಮಾಡಿ ಭವ್ಯ ಮಂದಿರ ನಿರ್ಮಿಸಿ ಎಲ್ಲಾ ಭಕ್ತರು ಸಮಾನವೆಂದು ತಿಳಿದು ಇಚ್ಛಿಸಿದ ಭಕ್ತರಿಗೆ ಲಿಂಗಾಧಾರಣೆ ಮಾಡಿ "ಸರ್ವಧರ್ಮ ಒಂದೇ ಮಾನವ ಧರ್ಮ" ಎಂದು ತಿಳಿ ಹೇಳಿ ಪ್ರತಿ ಶ್ರಾವಣ ಮಾಸದಲ್ಲಿ ತಿಂಗಳ ಪರ್ಯಂತ ಮಹಾರುದ್ರಾಭಿಷೇಕ, ಗುರುಪೂರ್ಣಿಮಾ, ನವರಾತ್ರಿ ನಿಮಿತ್ಯ ದೇವಿ ಪಾರಾಯಣ, ಶಿವರಾತ್ರಿಯೆಂದು ಶ್ರೀ ಮಲ್ಲಿಕಾರ್ಜುನ ಜಾತ್ರೆಯನ್ನು ವೈಭವಪೂರ್ವವಾಗಿ ನಡೆಸಿಕೊಟ್ಟಿದ್ದಾರೆ.
ಶ್ರೀ ಪೂಜ್ಯರು ದೇವಿಶಕ್ತಿ ಪುರುಷರು ಪೂಜ್ಯದಲ್ಲಿ ದೇವರನ್ನು ತೋರಿಸಿಕೊಟ್ಟ ಮಹಾತ್ಮರು. ನರನಾಳವನ್ನು ಸುಕ್ಷೇತ್ರ ಮಾಡಿ ಬೇಡಿದ ಭಕ್ತರಿಗೆ ಬೇಡಿದ್ದನ್ನು ಕೊಟ್ಟು ಅವರ ಇಷ್ಟಾರ್ಥಗಳನ್ನ ಪೂರೈಸಿ ಅಷ್ಟ ಐಶ್ವರ್ಯ ಕೊಟ್ಟು ಎಲ್ಲರನ್ನು ಧನ್ಯರನ್ನಾಗಿ ಮಾಡಿದ್ದಾರೆ.
ಪೂಜ್ಯರು ನರನಾಳವನ್ನು ಎರಡನೇ ಶ್ರೀಶೈಲವನ್ನಾಗಿ ಮಾಡಿ ಸುಕ್ಷೇತ್ರ ನರನಾಳ ಎಂದು ಭಕ್ತಸಮೂಹಕ್ಕೆ ತೋರಿಸಿಕೊಟ್ಟ ಹಾದಿಯಲ್ಲಿಯೇ ನಾವು ನಡೆದು ನಮ್ಮ ಬಾಳು ಪಾವನ ಮಾಡಿಕೊಂಡು ಸದಾ ಗುರುವಿನ ಸ್ಮರಣೆಯಲ್ಲಿ ಸಮಯ ಕಳೆದು ಧನ್ಯರಾಗಿದ್ದೇವೆ. ಸದಾ ಪೂಜ್ಯರ ಕೃಪೆ ನಮಗಿರಲಿ.
ಶ್ರೀ ಹಣಮಂತರಾವ ಮಾಸ್ಟರ್ ಬೇಮಳಗಿ
ಮು|| ನರನಾಳ ತಾ|| ಚಿಂಚೋಳಿ ಜಿ|| ಕಲಬುರಗಿ