: 11 Mar 2013 12:20 PM IST
ಸುದ್ದಿ ಸಂಕ್ಷೇಪ
ಚಿಂಚೋಳಿ: ತಾಲೂಕಿನ ನರನಾಳ ಗ್ರಾಮದ
ಮಲ್ಲಿಕಾರ್ಜುನ ದೇವಾಲಯದ 14ನೇ ಜಾತ್ರೆ,
ರಥೋತ್ಸವ ಮಾ.11ರಂದು ಸಂಜೆ 6.30ಕ್ಕೆ
ನಡೆಯಲಿದೆ. ರಥೋತ್ಸವ ನಿಮಿತ್ತ ಸಂಜೆ
ಶಿವಾನುಭವ ಚಿಂತನಗೋಷ್ಟಿಯ ನೇತೃತ್ವವನ್ನು
ಷ.ಬ್ರ. ಶಿವಕುಮಾರ ಶಿವಾಚಾರ್ಯರು ವಹಿಸಲಿದ್ದಾರೆ.
ಸಾನಿಧ್ಯವನ್ನು ಷ.ಬ್ರ. ವೀರ ತಪಸ್ವಿ ವೀರಭದ್ರ
ಶಿವಾಚಾರ್ಯರು,ಕಡಗಂಚಿ, ಷ.ಬ್ರ.ಚೆನ್ನಮಲ್ಲ
ಶಿವಯೋಗಿಗಳು ವಿರಕ್ತ ಮಠ ಹುಡುಗಿ ವಹಿಸಲಿದ್ದಾರೆ.
ಮಾಜಿ ಶಾಸಕ ಸುನೀಲ್ ವಲ್ಯಾಪುರ ಅಧ್ಯಕ್ಷತೆ ವಹಿಸಲಿದ್ದಾರೆ.
ಜಾತ್ರೆ ನಿಮಿತ್ತ 'ಹುಡುಗಿ ಮೆಚ್ಚಿದ ಹುಂಬ' ಎಂಬ
ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.
ಕೃಪೆ:ಕನ್ನಡಪ್ರಭ
No comments:
Post a Comment